ನನ್ನ ಬಗ್ಗೆ ಸಣ್ಣ ಪರಿಚಯ :
ಹೆಸರು : ಸುರೇಶ ಪೂಜಾರಿ
ವಿಳಾಸ : ಶಿರಸಿ ಉತ್ತರಕನ್ನಡ
ಶಿಕ್ಷಣ : ಬಿ ಕಾಂ ಪದವಿ
ಉದ್ಯೋಗ : ಖಾಸಗಿ ಸಂಸ್ಥೆಯಲ್ಲಿ ಕ್ಯಾಷಿಯರ್ ಹುದ್ದೆ
ನನ್ನ ಹೆಸರು ಸುರೇಶ ಪೂಜಾರಿ. ನಾನು ಮಧ್ಯಮವರ್ಗದವನಾಗಿದ್ದು ನನ್ನ ಶಿಕ಼ಣ ಮುಗಿದ ನಂತರ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗಲು ನಿರ್ಧರಿಸಿ ಈಗ ಸುಮಾರು 10 ವರ್ಷಗಳ ಕಾಲ ಕ್ಯಾಷಿಯರ್ ಹುದ್ದೆಯಲ್ಲಿ ತೊಡಗಿದ್ದೇನೆ. ಕೆಲಸದ ಬಿಡುವಿನಲ್ಲಿ ಬೇರೋಂದು ಆದಾಯವನ್ನು ಗಲಿಸುವ ಸಲುವಾಗಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಇದರಲ್ಲಿ ಕನ್ನಡ ಬ್ಲಾಗಿಂಗ್ ಒಂದು ಬಹುಮುಖ್ಯ ಆದಾಯದ ಮೂಲವಾಗಿದೆ..
ನಾನು ನನ್ನ ಬ್ಲಾಗಿಂಗ್ ನಲ್ಲಿ ಶಿಸ್ತುಭದ್ಧ ಜೀವನ, ವ್ಯಾಯಾಮ,ಯೋಗಾಭ್ಯಾಸಗಳು,ಪ್ರೋಟೀನ್ ಅಂಶಗಳು,ಉತ್ತಮ ಆಹಾರಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ವಿವರಿಸಿದ್ದೇನೆ.
ಮಾನವನ ಆರೋಗ್ಯಯುತ ಜೀವನಕ್ಕೆ ಅವಶ್ಯವಿರುವ ಕೆಲವೊಂದು ಅಂಶಗಳ ಕುರಿತು ಸುಲಭವಾಗಿ ಮನೆಯಲ್ಲಿಯೇ ಅನುಸರಿಸಬಹುದಾದ ಅಭ್ಯಾಸಗಳನ್ನು ಈ ಬ್ಲಾಗಿಂಗ್ ನಲ್ಲಿ ತಿಳಿಸಿದ್ದೇನೆ.
ನಾವು ದಿನನಿತ್ಯವೂ ಬಳಸುವ ಆಹಾರಗಳು ಮತ್ತು ಬಳಸಲೇ ಬೇಕಾದ ಪ್ರೋಟೀನಯುಕ್ತ ಪದಾರ್ಥಗಳ ಉಪಯೋಗಗಳ ಬಗ್ಗೆ ಜನರಿಗೆ ತಿಳಿಸುವುದು ನನ್ನ ಉದ್ದೇಶವಾಗಿದೆ. ಮನೆಯಲ್ಲಿಯೇ ಮಾಡಬಹುದಾದ ಲಘು ವ್ಯಾಯಾಮಗಳು, ಯೋಗಾಭ್ಯಾಸಗಳು ಇವುಗಳ ಬಗ್ಗೆ ಉತ್ತಮ ರೀತಿಯಲ್ಲಿ ಮಾಹಿತಿಯನ್ನು ನೀಡಲು ಬಯಸುತ್ತೇನೆ…
ಧನ್ಯವಾದಗಳು….